ನಧೀಮ್ ಧೀಮ್ ತನ Nadheem Dheem Tana Lyrics

Listen it on YouTube while reading Lyrics

ಸಾಂಗ್ ಕ್ರೆಡಿಟ್ಸ್

ಹಾಡು: ನಧೀಮ್ ಧೀಮ್
ಗಾಯಕಿ : ಚೈತ್ರ
ಚಿತ್ರ: ಗಾಳಿಪಟ
ಸಂಗೀತ ನಿರ್ದೇಶಕ: ವಿ ಹರಿರಿಕೃಷ್ಣ
ಗೀತ ರಚನೆಕಾರ: ಜಯಂತ್ ಕೈಕಿಣಿ, ಯೋಗರಾಜ್ ಭಟ್, ಹೃದಯಾಯಶಿವ

CLICK HERE TO READ THIS SONGS LYRICS IN ENGLISH

ನಧೀಮ್ ಧೀಮ್ ತನ, ನಧೀಮ್ ಧೀಮ್ ತನ
ಮಧುರ ಪ್ರೇಮದ ಮೊದಲ ತಲ್ಲಣ ಧನ್ಯ ಆಲಿಂಗನ

ನಧೀಮ್ ಧೀಮ್ ತನ, ನಧೀಮ್ ಧೀಮ್ ತನ
ಮಧುರ ಪ್ರೇಮದ ಮೊದಲ ತಲ್ಲಣ ಧನ್ಯ ಆಲಿಂಗನ

ತಾಕಿಟ ತರಿಕಿಟ ಎನ್ನುತಿದೆ ಈ ಹೃದಯ ಮೃದ೦ಗ
ಸುಂದರ ಮಾನಸ ಸರೋವರದಲಿ ಪ್ರೇಮ ತರಂಗ
ಈ ಕಣ್ಣಿನ ಕವನ ಓದೊ ಓ ಹುಡುಗ

ನಧೀಮ್ ಧೀಮ್ ತನ, ನಧೀಮ್ ಧೀಮ್ ತನ
ಮಧುರ ಪ್ರೇಮದ ಮೊದಲ ತಲ್ಲಣ ಧನ್ಯ ಆಲಿಂಗನ
ಮೊದಲ ಹೆಜ್ಜೆಗೆ ಎನೊ ಕಂಪನ ಏನೀ ರೋಮಾಂಚನ

CLICK HERE TO READ THIS SONGS LYRICS IN ENGLISH

ಪ್ರೇಮದ ಸರಿಗಮ ಸ್ವರ ತಾಳದ ಕೊಳದಲ್ಲಿ
ಆಡುತ ತೇಲಾಡುತ ಜ್ವರವೇರಿಸು ಮಳೆಯಲ್ಲಿ
ಒಂದೂರಲ್ಲಿ ರಾಜ ರಾಣಿ ನೂರು ಮಕ್ಕಳ ಹೆತ್ತ ಕಥೆಗೆ
ದುಂಡು ಮುಖದ ರಾಜಕುಮಾರ ಕೋಟೆ ದಾಟಿ ಬಂದ ಕಥೆಗೆ
ನಾಯಕ ನೀನೇ… ಆ ಚಂದಮಾಮ ಕಥೆಗೆ ನಾಯಕಿ ನಾ

ನಧೀಮ್ ಧೀಮ್ ತನ, ನಧೀಮ್ ಧೀಮ್ ತನ
ಮಧುರ ಪ್ರೇಮದ ಮೊದಲ ತಲ್ಲಣ ಧನ್ಯ ಆಲಿಂಗನ
ಮೊದಲ ಹೆಜ್ಜೆಗೆ ಎನೊ ಕಂಪನ ಏನೀ ರೋಮಾಂಚನ

ಸುಮ್ಮನೆ ತಿಳಿ ತಿಳಿ ನಾನಾಡದ ಪದಗಳನು
ಸೋಲುವೆ ಪ್ರತಿ ಕ್ಷಣ ನನ್ನ ಮನದಲೆ ನಾನು
ನಿದ್ದೆ ಬರದ ಕಣ್ಣಾ ಮೇಲೆ ಕೈಯಾ ಮುಗಿವೆ ಚುಂಬಿಸು ನೀ
ನಾನೆ ನಾಚಿ ನಡುಗೊ ವೇಳೆ ಮಲ್ಲೆ ಹೂವ ಮುಡಿಸೊ ಒಮ್ಮೆ
ನಾನು ಭೂಮಿ ಆವರಿಸು ಸುರಿವ ಮಳೆಯಂತೆ ನನ್ನ

ನಧೀಮ್ ಧೀಮ್ ತನ, ನಧೀಮ್ ಧೀಮ್ ತನ
ಮಧುರ ಪ್ರೇಮದ ಮೊದಲ ತಲ್ಲಣ ಧನ್ಯ ಆಲಿಂಗನ

ತಾಕಿಟ ತರಿಕಿಟ ಎನ್ನುತಿದೆ ಈ ಹೃದಯ ಮೃದ೦ಗ
ಸುಂದರ ಮಾನಸ ಸರೋವರದಲಿ ಪ್ರೇಮ ತರಂಗ
ಈ ಕಣ್ಣಿನ ಕವನ ಓದೊ ಓ ಹುಡುಗ

CLICK HERE TO READ THIS SONGS LYRICS IN ENGLISH